ಜಂಟಲ್‌ಮ್ಯಾನ್ 2020 ರ ಕನ್ನಡ ಅಪರಾಧ - ಸಾಹಸ ಚಿತ್ರವಾಗಿದ್ದು ಜಡೇಶ್ ಕುಮಾರ್ ಹಂಪಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಗುರು ದೇಶಪಾಂಡೆ ಅವರ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ಪ್ರೊಡಕ್ಷನ್ಸ್ (ಜಿ ಸಿನಿಮಾಸ್) ನಿರ್ಮಿಸಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ಜೊತೆಗೆ ಸಂಚಾರಿ ವಿಜಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರಗಳಲ್ಲಿ ಆರಾಧ್ಯ, ಎನ್. ಚಂದ್ರು, ತಬಲಾ ನಾಣಿ ಮತ್ತು ಅರುಣಾ ಬಾಲರಾಜ್ ಇದ್ದಾರೆ. ಚಿತ್ರಕ್ಕೆ ಸಂಗೀತವನ್ನು ಬಿ.ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ . ಮುರಳಿ ಮೋಹನ್ ಕಸ್ತಲ ಮತ್ತು ಆರೂರ್ ಸುಧಾಕರ ಶೆಟ್ಟಿ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಸಂಕಲನವನ್ನು ವೆಂಕಟೇಶ್ ಯು.ಡಿ.ವಿ. ಮಾಡಿದ್ದಾರೆ. == ಪಾತ್ರವರ್ಗ == ಪ್ರಜ್ವಲ್ ದೇವರಾಜ್ ಭರತ್ ಪಾತ್ರದಲ್ಲಿ ತಪಸ್ವಿನಿಯಾಗಿ ನಿಶ್ವಿಕಾ ನಾಯ್ಡು ಸಂಚಾರಿ ವಿಜಯ್ ಇನ್ಸ್‌ಪೆಕ್ಟರ್ ಶಿವಮೂರ್ತಿಯಾಗಿ ಜಾನಿ ಪಾತ್ರದಲ್ಲಿ ಪ್ರಶಾಂತ್ ಸಿದ್ದಿ ಭರತ್ ಅವರ ಸೊಸೆಯಾಗಿ ಆರಾಧ್ಯ ಎನ್.ಚಂದ್ರು ಭರತ್ ಕಲ್ಯಾಣ್ ಭರತ್ ಅವರ ಸಹೋದರನಾಗಿ ವಿಜಯ್ ಚೆಂಡೂರ್ ಆಟೋ ಚಾಲಕನಾಗಿ ತಬಲಾ ನಾನಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಕಾನ್ ಸ್ಟೇಬಲ್ ನಾಗಪ್ಪ ಪಾತ್ರದಲ್ಲಿ ಗೋವಿಂದೇಗೌಡ ತಪಸ್ವಿನಿಯ ತಾಯಿಯಾಗಿ ಅರುಣಾ ಬಾಲರಾಜ್ ತಪಸ್ವಿನಿಯ ತಂದೆಯಾಗಿ ಹನುಮಂತೇಗೌಡ == ಹಿನ್ನೆಲೆಸಂಗೀತ == ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಬಿ.ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಆನಂದ ಆಡಿಯೋ ಪಡೆದುಕೊಂಡಿದೆ. == ನಿರ್ಮಾಣ == ಚಿತ್ರದ ಪ್ರಧಾನ ಛಾಯಾಗ್ರಹಣವನ್ನು 25 ಅಕ್ಟೋಬರ್ 2018 ರಂದು ನಡೆಸಲಾಯಿತು. ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಮತ್ತು ನಾಯಕಿ ನಿಶ್ವಿಕಾ ನಾಯ್ಡು ಇದ್ದಾರೆ. ತಂಡವು ನಂತರ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಲು ಅಜನೀಶ್ ಲೋಕನಾಥ್ ಅವರನ್ನು ಹೊಂದಿತ್ತು. ಚಿತ್ರದ ಎರಡನೇ ಶೆಡ್ಯೂಲ್ 6 ಮೇ 2019 ರಂದು ಪ್ರಾರಂಭವಾಯಿತು == ಬಿಡುಗಡೆ == ಚಲನಚಿತ್ರ ನಟನ ಹುಟ್ಟುಹಬ್ಬದ ಕಾರಣ 4 ಜುಲೈ 2018 ರಂದು ತನ್ನ ಮೊದಲ ನೋಟ ಭಿತ್ತಿಚಿತ್ರ ಬಿಡುಗಡೆ ಮಾಡಿತು. ಚಿತ್ರದ ಮೊದಲ ಹಾಡು 27 ಡಿಸೆಂಬರ್ 2019 ಬಿಡುಗಡೆಯಾಯಿತು ಚಿತ್ರದ ಎರಡನೇ ಹಾಡು 16 ಜನವರಿ 2020 ರಂದು ಹೊರಬಂದಿತು ಚಿತ್ರದ ಟ್ರೈಲರ್ ಅನ್ನು 6 ಜನವರಿ 2020 ರಂದು ಪುನ್ನೇತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಬಿಡುಗಡೆ ಮಾಡಿದರು ಆಂಟನಿ ದಾಸನ್ ಹಾಡಿರುವ ಚಿತ್ರದ ವೇಕ್ ಅಪ್ ಥೀಮ್ ಹಾಡನ್ನು 27 ಜನವರಿ 2019ರಂದು ಬಿಡುಗಡೆ ಮಾಡಲಾಯಿತು . ಬಿಡುಗಡೆಗೂ ಮುನ್ನವೇ ಚಿತ್ರ ತಮಿಳು ಮತ್ತು ತೆಲುಗು ರಿಮೇಕ್ ಹಕ್ಕುಗಳನ್ನು ಮಾರಾಟ ಮಾಡಿತ್ತು. ಚಲನಚಿತ್ರವು 7 ಫೆಬ್ರವರಿ 2020 ರಂದು ಬಿಡುಗಡೆಯಾಯಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಬಾಹ್ಯ ಕೊಂಡಿಗಳು == ಜಂಟಲ್‌ಮನ್‌ @ ಐ ಎಮ್ ಡಿ ಬಿ == ಉಲ್ಲೇಖಗಳು ==